
ಮಾರ್ಚ್ 22, 2025 ರಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಅಖಂಡ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಈ ಬಂದ್ನ ಮುಖ್ಯ ಉದ್ದೇಶ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತು ಮರಾಠಿ ಪುಂಡರ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸುವುದು, ಹಾಗೂ ಕನ್ನಡಿಗರ ಹಕ್ಕುಗಳನ್ನು ರಕ್ಷಿಸುವುದು.
ಕನ್ನಡಪರ ಸಂಘಟನೆಗಳ 20 ಬೇಡಿಕೆಗಳು:
1. ಉತ್ತರ ಕರ್ನಾಟಕದ ಅಭಿವೃದ್ಧಿ.
2. ಕಲ್ಯಾಣ ಕರ್ನಾಟಕದ ಅಭಿವೃದ್ಧಿ.
3. ರಾಜ್ಯದ ಗಡಿನಾಡುಗಳ ಅಭಿವೃದ್ಧಿ.
4. ಬೆಳಗಾವಿಯನ್ನು ಕರ್ನಾಟಕದಲ್ಲಿ ಉಳಿಸಬೇಕು ಮತ್ತು ಎಂಇಎಸ್ ಅನ್ನು ನಿಷೇಧಿಸಬೇಕು.
5. ಶಿವಸೇನೆ ಮತ್ತು ಎಂಇಎಸ್ ಪುಂಡರನ್ನು ಗಡೀಪಾರು ಮಾಡಬೇಕು.
6. ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ರಾಜೀನಾಮೆ ನೀಡಬೇಕು.
7. ಸಾಂಬಾಜಿ ಪ್ರತಿಮೆಯನ್ನು ತೆರವುಗೊಳಿಸಬೇಕು.
8. ಕನ್ನಡ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕು.
9. ಮಹದಾಯಿ-ಕಳಸಾ ಭಂಡೂರಿ ಯೋಜನೆಗಳನ್ನು ಕಾರ್ಯಗತಗೊಳಿಸಬೇಕು.
10. ಮೇಕೆದಾಟು ಯೋಜನೆ ತಕ್ಷಣ ಆರಂಭಿಸಬೇಕು.
11. ಕೊಪ್ಪಳ ಸುತ್ತಮುತ್ತ ಯಾವುದೇ ಕಾರ್ಖಾನೆಗಳನ್ನು ಸ್ಥಾಪಿಸಬಾರದು.
12. ಕರ್ನಾಟಕದಲ್ಲಿ ಪರಭಾಷಾ ದಬ್ಬಾಳಿಕೆಯನ್ನು ನಿಲ್ಲಿಸಬೇಕು.
13. ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳನ್ನು ಬಹಿಷ್ಕರಿಸಬೇಕು.
14. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಹೇರಿಕೆ ಬೇಡ.
15. ಮಹಾರಾಷ್ಟ್ರದಲ್ಲಿ ಕನ್ನಡ ಮಹಾಮಹಿಮರ ಪ್ರತಿಮೆಗಳು ಸ್ಥಾಪನೆಯಾಗಬೇಕು.
16. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ, ಆಯ-ವ್ಯಯದಲ್ಲಿ ಕರ್ನಾಟಕವನ್ನು ಕಡೆಗಣಿಸಲಾಗಿದೆ.
17. ಮಂಗಳೂರು-ಕಾರವಾರ ಬಂದರುಗಳನ್ನು ಅಭಿವೃದ್ಧಿಪಡಿಸಬೇಕು.
18. ಬೆಂಗಳೂರು ನಗರದಲ್ಲಿ ಅನಧಿಕೃತ ಕಂಪನಿಗಳು ಹೊರರಾಜ್ಯದ ಚಾಲಕರನ್ನು ಗುತ್ತಿಗೆ ಆಧಾರದ ಮೇಲೆ ಕರೆತರುತ್ತಿರುವುದರಿಂದ ನಮ್ಮ ಚಾಲಕರಿಗೆ ಅನ್ಯಾಯವಾಗುತ್ತಿದೆ.
19. ಮೆಟ್ರೋ ದರ ಏರಿಕೆಯನ್ನು ವಿರೋಧಿಸಬೇಕು.
20. ಮೆಟ್ರೋದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು.
ಬಂದ್ಗೆ ಬೆಂಬಲ ನೀಡಿರುವ ಸಂಘಟನೆಗಳು:
ನೈತಿಕ ಬೆಂಬಲ:
• ಮದ್ಯ ಮಾರಾಟಗಾರರ ಸಂಘ
• ಕೆಲ ಮಾಲ್ ಅಸೋಸಿಯೇಷನ್ಗಳು
• ಹೋಲ್ಸೆಲ್ ಬಟ್ಟೆ ವ್ಯಾಪಾರಸ್ಥರು
• ಹೋಟೆಲ್ ಅಸೋಸಿಯೇಷನ್
• ಬೆಂಗಳೂರು ಸಂಚಾರಿ ಆಟೋ ಸೇನೆ
• APMC ಮಾರುಕಟ್ಟೆಗಳ ಒಕ್ಕೂಟ
• ಸರ್ವ ಸಂಘಟನೆಗಳ ಒಕ್ಕೂಟ
• ಖಾಸಗಿ ಸಾರಿಗೆ ಒಕ್ಕೂಟ
• ಕರ್ನಾಟಕ ರಕ್ಷಣಾ ವೇದಿಕೆ ಅಭಿಮಾನಿ ಸಂಘ
• ಕರ್ನಾಟಕ ರಕ್ಷಣಾ ವೇದಿಕೆ ಧ್ವನಿ
• ಪೀಣ್ಯ ಕಾರ್ಮಿಕರ ಸಂಘ
• ಬೀದಿ ಬದಿ ವ್ಯಾಪಾರಿಗಳ ಸಂಘಟನೆ
• ಕರ್ನಾಟಕ ರಾಜ್ಯ ರೈತ ಸಂಘಟನೆ
• ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್
• ಖಾಸಗಿ ಶಾಲೆಗಳ ಒಕ್ಕೂಟ ಕೃಪಾ
• ಖಾಸಗಿ ಶಾಲೆಗಳ ಒಕ್ಕೂಟ ರುಪ್ಸ
• ಪೋಷಕರ ಸಮನ್ವಯ ಸಮಿತಿ
• ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ
• ಪೀಸ್ ಆಟೋ ಸಂಘಟನೆ
• ಕರುನಾಡು ಕಾರ್ಮಿಕ ಸೇನೆ
• BMTC-KSRTC ನೌಕರರ ಸಂಘ
• ನಮ್ಮ ಚಾಲಕರ ಪರಿಷತ್
• ಏರ್ಪೋರ್ಟ್ ಟ್ಯಾಕ್ಸಿ
• ಗಾರ್ಮೆಂಟ್ಸ್ ಅಸೋಸಿಯೇಷನ್
• ಲಾರಿ ಚಾಲಕರ ಸಂಘ
ಸಂಪೂರ್ಣ ಬೆಂಬಲ:
• ಓಲಾ-ಉಬರ್ ಚಾಲಕರ ಸಂಘ
• ಶಿವರಾಮೇಗೌಡ ಬಣ
• ಕರವೇ ಗಜಕೇಸರಿ ಸೇನೆ
• ಡಾ.ರಾಜ್ ಕುಮಾರ್ ಅಭಿಮಾನಿ ಸಂಘ
• ವೀರ ಕನ್ನಡಿಗರ ಸೇನೆ
• ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು
• ರೂಪೇಶ್ ರಾಜಣ್ಣ ಬಣ
• ಬೆಂಗಳೂರು ಆಟೋ ಸೇನೆ
• ಜಯಭಾರತ್ ಚಾಲಕರ ಸಂಘ
• ಕರ್ನಾಟಕ ಜನಪರ ವೇದಿಕೆ
• ಆದರ್ಶ ಆಟೋ ಯೂನಿಯನ್
• ಗೂಡ್ಸ್ ಚಾಲಕರ ಸಂಘ
ಯಾವುದೇ ಬೆಂಬಲ ಇಲ್ಲ:
• ಕರವೇ ನಾರಾಯಣಗೌಡ
• ಪ್ರವೀಣ್ ಶೆಟ್ಟಿ
ಏನಿರುತ್ತೆ?
• ಹಾಲು, ದಿನಪತ್ರಿಕೆ,ಮೆಡಿಕಲ್
• ವೈದ್ಯಕೀಯ ಸೇವೆ ಎಂದಿನಂತೆ ಇರಲಿದೆ
• ಮೆಟ್ರೋ ಸಂಚಾರ, BMTC,KSRTC,ರೈಲು
• ಶಾಲಾ ವಾಹನದ ವ್ಯವಸ್ಥೆ,ಖಾಸಗಿ ಬಸ್
• ಆ್ಯಂಬುಲೆನ್ಸ್ ,ಹೋಲ್ ಸೆಲ್ ಬಟ್ಟೆ ಅಂಗಡಿ
• ತರಕಾರಿ,ಹೂ, ಹಣ್ಣುಗಳು, ಸೂಪರ್ ಮಾರ್ಕೆಟ್
• ಹೋಟೆಲ್ ಗಳ ಎಂದಿನಂತೆ ಓಪನ್ ಇರಲಿದೆ
• ಬಾರ್ ಗಳು ಓಪನ್,ಏರ್ ಪೋರ್ಟ್ ಟ್ಯಾಕ್ಸಿ ಸೇವೆ
• 65% ಆಟೋಗಳ ಸೇವೆ ಬಂದ್ ದಿನ ಇರಲಿದೆ.
ಏನಿರಲ್ಲ?
• ಮಧ್ಯಾಹ್ನತನಕ ಥಿಯೇಟರ್ ಗಳು ಬಂದ್
• ಓಲಾ-ಊಬರ್ ಸೇವೆಯಲ್ಲಿ ವ್ಯತ್ಯಯ
• 35% ಆಟೋ ಸೇವೆಯಲ್ಲಿ ತುಸು ವ್ಯತ್ಯಯ
• ಗೂಡ್ಸ್ ವಾಹನಗಳ ಸೇವೆಯಲ್ಲಿ ವ್ಯತ್ಯಯ