
ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಆವಾಸ್ (ಗ್ರಾಮೀಣ) ಯೋಜನೆಯು 2024 ರಿಂದ 2028 ರವರೆಗೆ ಹಂತ ಹಂತವಾಗಿ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ತಮ್ಮದೇ ಆದ ಮನೆ ನಿರ್ಮಿಸಲು ಈ ಯೋಜನೆಯು ಒಂದು ಶ್ರೇಷ್ಠ ಅವಕಾಶವನ್ನು ಒದಗಿಸುತ್ತಿದೆ.
Awaas Plus 2024 App ಮೂಲಕ ಅರ್ಹ ವಸತಿ ರಹಿತರನ್ನು ಗುರುತಿಸುವ ಸಮೀಕ್ಷೆ ಪ್ರಾರಂಭವಾಗುತ್ತಿದ್ದು, ಈ ಯೋಜನೆಯಡಿ ಸೌಲಭ್ಯ ಪಡೆಯಲು ಬೇಕಾದ ಪ್ರಾರಂಭಿಕ ಹೆಜ್ಜೆಯಾಗಿದೆ. ಈ ಸಮೀಕ್ಷೆ 15-02-2025 ರಂದು ಬೆಳಿಗ್ಗೆ 09:30 ಗಂಟೆಗೆ ನಿಮ್ಮ ಗ್ರಾಮದಲ್ಲಿ ಪ್ರಾರಂಭವಾಗಲಿದೆ.
ಅರ್ಹ ಅಭ್ಯರ್ಥಿಗಳು ತಮ್ಮ ಗ್ರಾಮ ಪಂಚಾಯತ ಕಚೇರಿಗೆ ಕೆಳಕಂಡ ದಾಖಲೆಗಳನ್ನು ಸಲ್ಲಿಸಬೇಕು:
• ಪಡಿತರ ಚೀಟಿ
• ಆಧಾರ್ ಕಾರ್ಡ್
• ಆದಾಯ ಮತ್ತು ಜಾತಿ ಪ್ರಮಾಣಪತ್ರ
• ಬ್ಯಾಂಕ್ ಪಾಸ್ ಬುಕ್
• ನರೇಗಾ ಉದ್ಯೋಗ ಚೀಟಿ
ಈ ದಾಖಲೆಗಳನ್ನು ಸಲ್ಲಿಸಿದ ಬಳಿಕ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು AwaasPlus 2024 App ಮೂಲಕ ಖಾಲಿ ನಿವೇಶನಗಳ ಜಿಪಿಎಸ್ ಸಮೀಕ್ಷೆ ನಡೆಸುತ್ತಾರೆ. ನಂತರ ಮಾಹಿತಿ ಪರಿಶೀಲಿಸಿ, ಸರ್ಕಾರವು ನಿಗದಿಪಡಿಸಿದ ಆದ್ಯತೆ ಪಟ್ಟಿಗೆ ಅನುಗುಣವಾಗಿ ಹಂತ ಹಂತವಾಗಿ ಸೌಲಭ್ಯ ನೀಡಲಾಗುತ್ತದೆ.
ಘಟಕ ವೆಚ್ಚದ ವಿವರ:
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ: ರೂ. 1,75,000
ಸಾಮಾನ್ಯ/ಅಲ್ಪಸಂಖ್ಯಾತರು: ರೂ. 1,20,000
MGNREGA ಯೊಜನೆಯೊಂದಿಗೆ ಏಕೀಕರಣ:
90 ಮಾನವ ದಿನಗಳು X ₹370 = ₹33,300
ಈ ಯೋಜನೆಯ ಗುರಿ, ಗ್ರಾಮೀಣ ಬಡ ಕುಟುಂಬಗಳಿಗೆ ಶಾಶ್ವತವಾದ, ಗುಣಮಟ್ಟದ ಮತ್ತು ಸುರಕ್ಷಿತ ವಸತಿ ಒದಗಿಸುವುದು. ಇದೊಂದು ನಾಡಿನ ಸಮಗ್ರ ಅಭಿವೃದ್ಧಿಗೆ ಬುನಾದಿಯಾದ ಹೆಜ್ಜೆಯಾಗಿದೆ.
👉🏻 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 30, 2025.
ಆದ್ದರಿಂದ ಅರ್ಹ ಅಭ್ಯರ್ಥಿಗಳು ತಮ್ಮ ಹಕ್ಕುಗಳನ್ನು ಪಡೆಯಲು ತಡವಿಲ್ಲದೆ ದಾಖಲೆಗಳನ್ನು ಸಲ್ಲಿಸಿ, ಈ ಸೌಲಭ್ಯದಿಂದ ಪ್ರಯೋಜನ ಪಡೆಯಬೇಕು.
ಈ ಬಾರಿ ಮನೆ, ನಿಮ್ಮದೇ ಆಗಲಿ!
ಪ್ರಧಾನ ಮಂತ್ರಿ ಆವಾಸ್ (ಗ್ರಾ) ಯೋಜನೆಯ ಈ ಸದುಪಯೋಗವನ್ನು ತಪ್ಪಿಸಿಕೊಳ್ಳಬೇಡಿ.